ಟೆಲಿವಿಷನ್ ಪ್ರೀಮಿಯರ್‌ ಲೀಗ್ ತಾಲೀಮು ಪಂದ್ಯದಲ್ಲಿಯೇ ರೋಚಕ
Posted date: 04 Thu, Jan 2024 11:03:57 PM
ಟೆಲಿವಿಷನ್ ಪ್ರೀಮಿಯರ್‌ ಲೀಗ್ ಪಂದ್ಯಾವಳಿ ಫೆಬ್ರವರಿ 28, 29 ಮತ್ತು ಮಾರ್ಚ್ 1 ರಂದು ಹುಬ್ಬಳ್ಳಿ ಯಲ್ಲಿ ಪಂದ್ಯಾವಳಿ ನಡೆಯಲಿದೆ ಈ ಹಿನ್ನೆಲೆಯಲ್ಲಿ ತಾಲೀಮು ಪಂದ್ಯ ಗ್ರೀನ್ ವಿಲೇಜ್ ಕ್ರೀಡಾಂಗಣ ದಲ್ಲಿ ನಡೆಯಿತು ರಾಸು ವಾರಿಯರ್ಸ್ ತಂಡ , ಇನಾಸ್ಸ್ ಕ್ರಿಕೆಟ್ ಟೀಮ್ ಸೇರಿ ಎರಡು ಪಂದ್ಯ ಗೆಲುವು ಸಾಧಿಸಿತು. ಅದರಲ್ಲಿ ಒಂದು ಪಂದ್ಯ ರೋಚಕವಾಗಿತು. ಟೈ ಆಗಿ ಸೂಪರ್ ಓವರ್ ನಲ್ಲಿ ಗೆದ್ದಿತು, ಪ್ರೆಂಡ್ಲಿ ಮ್ಯಾಚ್ ಆಗಿ ನಡೆದ ಪಂದ್ಯವೇ ಕುತೂಹಲವಾಗಿತ್ತು.
 
ರಾಸು ವಾರಿಯರ್ಸ್‌ ತಂಡಕ್ಕೆ ರಘು ಭಟ್ ಮಾಲೀಕ, ದೀಕ್ಷಿತ್ ಶೆಟ್ಟಿ ನಾಯಕರಾಗಿದ್ದಾರೆ. 
 
ರವಿಶಂಕರ್ ಗೌಡ, ಅನೂಪ್ ಸೀಳಿನ್, ಮಹೇಶ್, ಅನೇಕ ಕಿರಿತೆರೆಯ ಆಟಗಾರರು  ಪಂದ್ಯದ ತಾಲೀಮು ನಲ್ಲಿ ಭಾಗಿಯಾಗಿದ್ದರು.
 
ಎನ್ 1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಾ ಬಂದಿದೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್‌ಗಳು ಮುಗಿದಿದ್ದು, 3ನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ.
 
ಟಿಪಿಎಲ್ ದಿನದಿಂದ ದಿನಕ್ಕೆ ಆಕರ್ಷಿಸುತ್ತಿದ್ದು, ಐಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. 150 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಬಿಡ್ ಗೆ ಮಾರಾಟವಾದ ಆಟಗಾರರಿಗೆ ಎನ್ 1 ಅಕಾಡೆಮಿ ಕಡೆಯಿಂದ ಹಣದ ರೂಪದಲ್ಲಿ ರಿವಾರ್ಡ್ ಸಹ ನೀಡಲಾಗಿದೆ.

ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್‌ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೇವಿಯರ್ಸ್ , ಎವಿಆರ್ ಟಸ್ಕರ್ಸ್‌, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್‌ ಸ್ಕ್ವಾಡ್‌, ಇನ್‌ಸೇನ್‌ ಕ್ರಿಕೆಟ್‌ ಟೀಂ, ಜಿಎಲ್‌ಆರ್‌ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್‌ಗಳು ಭಾಗವಹಿಸಲಿದ್ದ 150 ಸೆಲೆಬ್ರಿಟಿಗಳು ಈ  ಟೂರ್ನಮೆಂಟ್ ಗೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್‌ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್‌ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.

ಮಾಲೀಕರು ಮತ್ತು ನಾಯಕರು:

ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್‌ಆರ್‌ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್ ಓನರ್, ಇನ್‌ಸೇನ್‌ ಕ್ರಿಕೆಟ್‌ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್‌ ಸ್ಕ್ವಾಡ್‌ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, 

ಎವಿಆರ್‌ ಟಸ್ಕರ್ಸ್‌ಗೆ ಚೇತನ್ ಸೂರ್ಯ ನಾಯಕ - ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೇವಿಯರ್ಸ್ ಟೀಂಗೆ ಅಲಕಾ ನಂದ ಶ್ರೀನಿವಾಸ್ ನಾಯಕ Dr.ವಿಶ್ವನಾಥ್ ಸಿದ್ದರಾಮರೆಡ್ಡಿ ಹಾಗು ಪ್ರಸನ್ನ ಓನರ್‌, ಮೀಡಿಯಾ ಹೌಸ್‌ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed